ಇತ್ತೀಚಿಗೆ ಭಾರತದ ಫಾಸ್ಟ್ ಬೌಲರ್ ಜ್ಯಹೀರ್ ಖಾನವರು ಭಾರತೀಯರ ದೇಹ ಫಾಸ್ಟ್ ಬೌಲಿಂಗ್ಗೆ ಸೂಟ್ ಆಗಲ್ಲ ಅಂತ ಹೇಳ್ಬಿಟ್ರು ನೋಡಿ. ಅವ್ರ್ಹೇಳೋದು ನಿಜಾನೆ ಬಿಡಿ, ವಿನಯ್ ಕುಮಾರೋ ಅಥವಾ ಪ್ರವೀಣ್ ಕುಮಾರೋ ಅವರ ಬೌಲಿಂಗ್ ಮುಂಚೆ "ರೈಟ್ ಆರ್ಮ್ ಫಾಸ್ಟ್ ಓವರ್ ದಿ ವಿಕೆಟ್" ಅಂತ ಹೇಳಿದ್ ಕೂಡ್ಲೇ ಅಂಪೈರ್ಗಳು ಎರ್ಡ್ ಹೆಜ್ಜೆ ಪಕ್ಕಕ್ಕ್ ಹೋಗಿ ನಾಕ್ ಸರಿ ನಕ್ಕಿ ಪ್ಯಾಂಟ್ ಬಿಗಿ ಮಾಡ್ಕೊಂಡ್ ವಾಪಸ್ ಬರ್ತಾರೆ. ತೊಂದರೆ ಏನು ಅಂತ ಹೇಳ್ತೀನಿ ಕೇಳಿ, ಇದು ಸಾಮರ್ಥ್ಯದ ಅಥವಾ ಪ್ರತಿಭೆಯ ಪ್ರಶ್ನೆ ಅಲ್ಲ. ಅದೇನೋ ಹೇಳ್ತಾರಲ್ಲ "ಎಲ್ಲಾ ಸಫಲ ಪುರುಷನ ಹಿಂದೆಯೂ ಒಬ್ಬ ಮಹಿಳೆ ಇರ್ತಾಳೆ" ಅಂತ, ಅದು ಪ್ರಾಬ್ಲಮ್ ನೋಡಿ. ನಮ್ಮ ವೀರರತ್ನ ಕೋಳಿಯವರ ಹಿಂದೆ ಸಿದ್ಧಾರ್ತ ನಿರ್ಮಾಲ್ಯರಾಗಿ ನಿಂತಿಲ್ವೇ? ಅದ್ಬಿಟ್ಟು ಸಫಲ ಅಂದಾಕ್ಷಣ ಸಫೋಲದಲ್ಲಿ ಕರೆದಿರೋ ಬೋಂಡ ಪಕೋಡ ತಿಂದು ಹೊಟ್ಟೆ ನೀವ್ಕೊಂಡು ನಾನೂ ಫಾಸ್ಟ್ ಬೌಲಿಂಗ್ ಮಾಡ್ತೀನಿ ಅಂದ್ರೆ ಹೇಗ್ ಆಗತ್ತೆ ಹೇಳಿ? ಅದೂ ಹೋಗ್ಕೊಳ್ಳಿ ಬಿಡಿ, ಅದಕ್ಕಿಂತ ಗಂಭೀರವಾದ ತೊಂದರೆಯೇನಂದ್ರೆ ಫಾಸ್ಟ್ ಬೋವ್ಲೆರ್ಸ್ ಹಿಂದೆ ಓಡಕ್ಕೆ ಫಾಸ್ಟ್ ಮಹಿಳೆಯರಿಲ್ಲ ನಮ್ಮ ದೇಶದಲ್ಲಿ. ಸ್ವಲ್ಪ ಫಾಸ್ಟ್ ಆಗ್ತೀನಿ ಅನ್ನೋಕಿಲ್ಲ ಆರ್ಎಸ್ಎಸ್ ಮತ್ತೆ ವಿಎಚ್ಪಿ ಅವರು ಲುಂಗಿ ಮೇಲೆತ್ತಿ ಕಟ್ಕೊಂಡ್ ಹಾಜರ್ ಆಗ್ಬಿಡ್ತಾರೆ. ಆ ಸೀರೆಯೆತ್ಕೊಂಡ್ ಹೇಗ್ ತಾನೇ ಓಡಕ್ಕ್ ಸಾಧ್ಯ ಹೇಳಿ? ಅದ್ ಸರೀ ಪಾಕಿಸ್ತಾನದಲ್ಲಿ ಬುರ್ಕ ಗವ್ನು ಹಾಕೊಂಡ್ ಅದ್ಹೆಂಗ್ ಒಡ್ತಾರೋಪ್ಪ? ಪ್ರಪಂಚದ ಅದ್ಭುತಗಳನ್ನ ನೋಡ್ದೆ ಇದ್ರೂ ಸರಿ, ಒಮ್ಮೆ ಆ ನೋಟ ನೋಡ್ಬೇಕು ಜೀವನದಲ್ಲಿ. ಮುಖ್ಯ ಮಂತ್ರಿಗಳಾದ ನಿತ್ಯಾ ಸದಾನಂದ ಗೌಡರೇ ಆಗಲಿ ಅಥವಾ ಪ್ರಧಾನಿಗಳಾದ ಮೌನಮೋಹನ ಸಿಂಗ್ರೇ ಆಗಲಿ ಆದ್ಯತೆಗಳನ್ನ ಸರಿಯಾಗಿ ಕೊಟ್ಟಿಲ್ಲ, ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಸೀಟ್ಗಳನ್ನ ಯಾಕ್ ಕಾಯ್ದಿರಿಸ್ಬೇಕು? ಡ್ರೈವಿಂಗ್ ಲೈಸನ್ಸ್ ಯಾಕ್ ಕೊಡ್ಬೇಕು? ಇದೆಲ್ಲ ನಮ್ಮ ತಂಡದಲ್ಲಿ ಫಾಸ್ಟ್ ಬೋವ್ಲೆರ್ಸ್ನ ವಂಚಿತರಾಗಿ ಮಾಡುತ್ತೆ. ಎಲ್ಲಾ ಸರೀ ಜ್ಯಹೀರ್ ಖಾನವರ ದೇಹಕ್ಕೂ ಮಹಿಳೆಯರ ಓಟಕ್ಕೂ ಏನ್ ಲಗತ್ತು? ಅದ್ಯೇನೋ ಹೇಳ್ತಾರಲ್ಲಾ ... ಹೋಗ್ಲೀ ಬಿಡಿ.
No comments:
Post a Comment